Thursday, January 14, 2010

ಬಿಳಿಗಿರಿಯ ಬನದಲ್ಲಿ .03 ಬುರುಡೆ ಕ್ಯಾಂಪಿನಲ್ಲಿ ವೀರಪ್ಪನ್ ನೆನಪು !!!

ಗುಂದಾಲ್ ಅಣೆಕಟ್ಟಿನ೨೩ ಕಿ.ಮಿ ಹಾದಿ ಕಾಡಿನಲ್ಲಿ ಸಂಚರಿಸಿ ಕೊನೆಗೆ ಬುರುಡೆ ಕ್ಯಾಂಪಿನ ಮನೆಗೆ ಬಂದೆವು. ಇದು ೧೯೪೦ ರಲ್ಲಿ ನಿರ್ಮಿಸಿದ ಒಂದು ದತ್ತದವಿಯ ಕ್ಯಾಂಪು .ಹಳೆಯ ಮನೆಯಾದರೂ ಉತ್ತಮ ನಿರ್ವಹಣೆ ಇದೆ!! ನಿಮಗೆ ಕಾಡಿನ ನಿಜದ ಅನುಭವ ನೀಡಲು ಈ ಮನೆಗೆ ವಿದ್ಯುತ್ ಸಂಪರ್ಕ?[ಇಲ್ಲಿಗೆ ಲೈನ್ ಎಳೆಯೋಕೆ ಕಾಡಿನಲ್ಲಿ ಕಂಬ ಹಾಕಬೇಕು]ಇಲ್ಲ .ಇದು ಒಂತರಚಂದದ ಅನುಭವ .ವಿದ್ಯುತ್ ಇದ್ರೆ ನಾವು ಟಿ.ವಿ. ಕೇಳ್ತಿವಿ,ಸಂಗೀತ ಬರುತ್ತೆ ,ಬೆಳಕಿನಲ್ಲಿ ಪರಿಸರ ನಮ್ಮಿಂದ ಹಾಳಾಗುತ್ತೆ ಅಲ್ವ?ಸ್ವಾಮೀ ಇಲ್ಲಿಗೆ ಬಂದ ನಂತರ ಇಲ್ಲಿ ಕಾಡುಗಳ್ಳ ವೀರಪ್ಪನ್ ನನ್ನು ಸ್ವಲ್ಪ ದಿನ ಇಟ್ಟಿದ್ರು ಅಂತ ಗೊತ್ತಾಯ್ತು!![ಈ ಬಗ್ಗೆ ಹಲವು ಅಂತರ್ಜಾಲಗಳಲ್ಲಿ ವೀರಪ್ಪನ್ ಹಾಗು ಈ ಪ್ರದೇಶದ ನಂಟಿನ ಬಗ್ಗೆ ಮಾಹಿತಿ ಹರಿದಾಡ್ತಿದೆ ] ವೀರಪ್ಪನ್ ಹಿಡಿಯೋಕೆ ಯಾಕೆ ಅಷ್ಟು ಕಷ್ಟ ಆಯ್ತು ಅಂತ ಇಲ್ಲಿಬಂದ್ರೆ ಗೊತ್ತಾಗುತ್ತೆ!! ನಾವೋ ಪಾಪ ಪೋಲಿಸ್ ನವರನ್ನು  ಆ ಕಾಲದಲ್ಲಿ ಬೈದಿದ್ದ ಬಗ್ಗೆ ಪಶ್ಚಾತ್ತಾಪ ಪಟ್ವಿ.ಈ ಜಾಗವು ದತ್ತ ಕಾಡಿನ ಮಧ್ಯ ದಲ್ಲಿದ್ದು, ಆನೆಗಳು,ಕಾಟಿಗಳು, ನಿರ್ಭಯವಾಗಿ ಓಡಾಡುವ ಪ್ರದೇಶ!! ನಮಗೂ ರಾತ್ರಿಯೆಲ್ಲ ಈಆನೆಗಳ ಗೀಳು ,ಕಾಟಿಗಳ ಅರಚಾಟ, ಕೇಳುವ ಅವಕಾಶ ಒದಗಿಬಂತು.ಕತ್ತಲಿನ ನಿಶ್ಯಬ್ದತೆ  ಹೊಸ ಪ್ರಪಂಚದೊಳಗೆ ನಾವು ಕಳೆದು ಹೋಗಿದ್ದೆವು.ಮೊಬೈಲ್ ಕಿರಿಕಿರಿ,ಟಿ.ವಿ. ಗದ್ದಲ,ವಾಹನಗಳ ಆರ್ಭಟ, ಎಲ್ಲದರಿಂದ ಮುಕ್ತ ...ಮುಕ್ತ !! ಶುದ್ದ ಗಾಳಿ ,ಮರಗಳ ಬೇರುಗಳಿಂದ ಜಾರಿ ಔಷದಿ ಗುಣವುಳ್ಳ ಶುದ್ದ ಜರಿಯ ನೀರು  ,ಎಲ್ಲ ಕಾಡಿನ ತಾಯಿ ನಮಗೆ ನೀಡಿ ಹರಸಿದಳು!! ರಾತ್ರಿ ಅಲ್ಲೇ ಇದ್ದ ಸಿಬ್ಬಂದಿ ನಮ್ಮ ಬುಟ್ಟಿಯಲ್ಲಿದ್ದ ಜೋಳದ ರೊಟ್ಟಿ,ಚಪಾತಿ,ಅನ್ನು ಬಿಸಿಮಾಡಿ , ಅಣ್ಣ  ಸಾಂಬಾರ್ [ಅಡಿಗೆ ತಯಾರಿ ಚಿತ್ರ ೦೫] ನೀಡಿ ತೃಪ್ತಿ ಪಡಿಸಿದರು.ಅಂದು ಸಂಜೆ ಒಬ್ಬ ಮನುಷ್ಯ ಕಾಡಿನ ಹಾದಿಯಲ್ಲಿ ಸೈಕಲ್ಲಿನಲ್ಲಿ ನಾವಿದ್ದ ಕ್ಯಾಂಪಿಗೆ ಬಂದದ್ದು  ಒಂತರ ವೀರಪ್ಪನ್ ನೋಡಿದ ಹಾಗೆ ಆಯ್ತು[ಚಿತ್ರ ೪] ನಾಡಿನಾಲ್ಲಿ ಇಲ್ಲದ ಸಂಬ್ರಮ ಕಾಡಿನಲ್ಲಿ ವೀರಪ್ಪನ್ ಅಲೆದ ಜಾಗಗಳಲ್ಲಿ ಸಿಕ್ಕಿತ್ತು!! ಹಾಗೆ ರಾತ್ರಿಯ ನೀರವತೆಯಲ್ಲಿ  ನಮ್ಮ ನಿದ್ರೆಯ ಯಾತ್ರೆ ಶುರುವಾಗಿತ್ತು .

No comments: