Wednesday, January 20, 2010

ಬಿಳಿಗಿರಿಯ ಬನದಲ್ಲಿ..೦೫ ಬನದೊಳಗೆ ನಲಿದಿಹ ವೆಂಕಟೇಶ!!


ಹೊನ್ನ ಮೇಟಿ ಕಲ್ಲು ಬೆಟ್ಟದ ಕಥೆ ನಿಮಗೆ ೦೪ ನೆ ಕಂತಿನಲ್ಲಿ ತಿಳಿಸಿದ್ದೆ, ಹಾಗೆ ವಾಪಸ್ಸು ಬರುವ ಹಾದಿಯಲ್ಲಿ ಹೊನ್ನ ಮೇಟಿ ಎಸ್ಟೇಟ್  ಮೂಲಕ ಬಂದೆವು. ಎಸ್ಟೇಟಿನ  ಕಿತ್ತಲೆಹಣ್ಣು ,ಕಾಫಿ ಸುವಾಸನೆ ಆಹ್ಲಾದಕರವಾಗಿತ್ತು! ಹೊನ್ನ ಮೇಟಿ  ತಲುಪಿದ ನಮಗೆ ಅಲ್ಲೇ ಇದ್ದ ಒಂದು ಬಿಳಿಯ ಮಂದಿರ ಕಣ್ಣಿಗೆ ಬಿತ್ತು!!.ವಿಚಾರಿಸಲಾಗಿ  ಹೊನ್ನ ಮೇಟಿ  ಎಸ್ಟೇಟ್ ಬಿರ್ಲಾ ದವರಿಗೆ ಸೇರಿದ್ದು ಅವರು ಇಲ್ಲಿ ಒಂದು ವೆಂಕಟೇಶ ದೇವಾಲಯ ಕಟ್ಟಿದ್ದಾರೆಂದು ತಿಳಿದು ಬಂತು.ಅಲ್ಲೇ ಇದ್ದ ಎಸ್ಟೇಟ್ನ ರೈಟರ್ /ಅರ್ಚಕರು ಬಂದು ದೇವಾಲಯ ಬಾಗಿಲು ತೆರೆದು ಪೂಜೆ ಮಾಡಿದರು. ಪ್ರಕೃತಿ ಮಡಿಲಲ್ಲಿ  ನಿರ್ಮಿಸಿದ ಈ ಸುಂದರ ದೇವಾಲಯ ಹೊಸ ಲೋಕಕ್ಕೆ ಕರೆದೊಯ್ಯುತ್ತದೆ !!! ದಣಿದ ಮನಸ್ಸು ಹಾಗು ದೇಹಕ್ಕೆ  ಈ ಜಾಗದ ವಿಶ್ರಾಂತಿ  ಮುದ ನೀಡಿತ್ತು. ಮನಸ್ಸಿನಲ್ಲಿ ಉಲ್ಲಾಸ ಮೂಡಿತ್ತು.!! ಬನ್ನಿ ದೇವಾಲಯ  ಹಾಗು ಪರಿಸರ ನೋಡಿ ಬರೋಣ!!



ಪ್ರಕೃತಿಯ ಆಲಯ  ಈ ದೇವಾಲಯ!!

No comments: