Thursday, January 28, 2010

ಗುಲ್ಬರ್ಗ ಮಿರ್ಜಿ ಬಜ್ಜಿ ತಿನ್ನೋಣ ಬನ್ನಿ !!! ಇಸ್ಸ್ಸ್ಸ್ ಆಆಅ ಹಹಹಹಾ !!


ನನ್ನ ಹಳೆ ಫೋಟೋ ತಿರುವಿ ಹಾಕ್ತಾ ಇದ್ದೆ  ಆಗ ಕಣ್ಣಿಗೆ ಬಿದ್ದು ನೆನಪಾತು  ಈ ಗುಲಬರ್ಗ ಪ್ರವಾಸ !!.ಹೌದು ಕಳೆದ ವರ್ಷ  ನಾನು ಅಲ್ಲಿಗೆ ನನ್ನ ತಮ್ಮ ಅಲ್ಲಿಗೆ ಹೋಗಿದ್ವಿ. ನೀವ್ ಬಂದದ್ದು ಬಾಳ್ ಚೆನ್ನಾಯ್ತು ಬಿಡ್ರಿಯಪ್ಪ,ಅಂತ ನಮ್ಮನ್ನು ಅಶೋಕ ಕುಲಕರ್ಣಿ  ಊರು ಸುತ್ತಿಸಿ  ಅಲ್ಲಿ ನಮಗೆ ಗುಲಬರ್ಗ ತಿಂಡಿ ರುಚಿ ತೋರಿಸಲು ಶುರುಮಾಡಿದರು.ಬರ್ರಿ ಇಲ್ಲಿ ಒಂದ್ಕಡಿ ಮಿರ್ಚಿ ಬಜ್ಜಿ ತಿನ್ನೋನು ಬಾಳ್ ಚಾಲೂ ಮಾಡ್ತನ್ರಿ ಇವ ಅಂತ ಒಂದು ಈ ಖಾನಾವಳಿ ಕಡಿ ಕರೆದುಕೊಂಡು ಹೊಂಟ್ರು.ಮೊದಲು ಇವ್ರಿಗಿ ಒಂದು ಪ್ಲೇಟ್ ಮಿರ್ಚಿ ಬಜ್ಜಿ ಕೊಡ್ರಿ ಅಂತ ತರ್ಸೆಬಿಟ್ರು ನಾನು ಹೊಸ ಪೂಜಾರಿ ರುಚಿ ನೋದೆಬಿಡುವ ಅಂತ ತಿನ್ನಕ್ಕೆ ಶುರು ಮಾಡ್ದೆ .ಬಹಳ ರುಚಿಕಟ್ಟಾಗಿತ್ತು,  ಚೆನ್ನಾಗಿದೆ ಅಂಕಲ್  ಅಂದೇ! ಈಗ ನೋಡ್ರಿ ಇನ್ನೊದು ವಿಶೇಷ ಅಂತ ಕಟ್ ಮಿರ್ಚಿ ಬಜ್ಜಿ ತರ್ಸಿ ಶುರು ಮಾಡಿ ಅಂದ್ರು ನಗು ಹುಮ್ಮಸ್ಸು  ಆಯ್ತು ಅಂತ ತಿಂದೆ ಬಿಟ್ಟೆ!!! ಸ್ವಾಮೀ ಮಿರ್ಚಿ ತನ್ನ ಪ್ರತಾಪ ತೋರ್ಸೋಕೆ ಶುರುಮಾಡಿತು .. ತಿನ್ನೋವಾಗ ಇದ್ದ ಖುಷಿ ತಿಂದ ಮೇಲೆ  ಇಳಿದೆ ಹೋಗಿತ್ತು.ಖಾರ ಖಾರ ಅಂತ  ಲಿತೆರ್ ಗಟ್ಲೆ ನೀರ್ ಕುಡ್ದು,ಸ್ವೀಟ್  ತಿಂದು ಸುದಾರ್ಸಿ ಕೊಂಡೆ .ಆದರೂ ಅಂಕಲ್ ಪ್ರೀತಿ ತುಂಬಾ ಖಾರವಾಗಿ  ಸಿಹಿಯಾಗಿ ಆತ್ಮೀಯವಾಗಿ ಉಳಿದುಕೊಂಡಿದೆ. ನೀವು ಗುಲ್ಬರ್ಗ ಗೆ ಹೋದ್ರೆ ಮಾರಿದೆ ಮಿರ್ಚಿ ಬಜ್ಜಿ ತಿನ್ನಿ ಆಯ್ತಾ.

No comments: