Tuesday, July 26, 2011

"ದೊಡ್ಡ ಸಂಪಿಗೆ" ಮರದ ವಿಸ್ಮಯ !!!! ಕೆ.ಗುಡಿಯಲ್ಲಿ ಕಳೆಯುವ ಸಮಯ ಆನಂದಮಯ !!!! ಪಯಣ ...08







ಬಿಳಿಗಿರಿಯ ಬನದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಎಷ್ಟೋ ಕೌತುಕಗಳು ಅಡಗಿವೆ.!! ಅಂತ ಒಂದು ಕೌತುಕದ ಬಗ್ಗೆ ತಿಳಿಯೋಣ ಬನ್ನಿ.ಬಿಳಿಗಿರಿ ರಂಗನ ಬೆಟ್ಟ ಶ್ರೇಣಿಯ ಕಾಡುಗಳು ದಟ್ಟವಾಗಿದ್ದು ವನ್ಯಜೀವಿಗಳಿಂದ ತುಂಬಿದೆ.ಇಂತಹ ಒಂದು ದಟ್ಟ ಕಾನನದ ಮಧ್ಯೆ ಸುಮಾರು ೨೦೦೦ ವರ್ಷ!!![ಅರಣ್ಯ ಇಲಾಖೆಯ ಮಾಹಿತಿಯಂತೆ}ಗಳಿಂದ ಈ  ವಿಸ್ಮಯ ದೊಡ್ಡ ಸಂಪಿಗೆ ಮರ  ಭಾರ್ಗವಿ ನದಿ ತೀರದಲ್ಲಿ  ನಿಂತಿದೆ ,               ಭಾರ್ಗವಿ ನದಿ [ ಈ ಸಣ್ಣ ನದಿ ಕಾವೇರಿಯ ಉಪನದಿ!! ಬಿಳಿಗಿರಿಯ ಬನದ  ಹಲವಾರು ಸಣ್ಣ ಜರಿಗಳು ಸೇರಿ ಆಗಿರುವ   ನದಿ!ಇದು ಕಾವೇರಿ ನದಿಯ ಉಪನದಿಯೂ ಹೌದು ,] ತೀರದಲ್ಲಿ  ಈ ಮರ ಸಂಪಿಗೆ ಸುವಾಸನೆ ಬೀರುತ್ತಿದೆ.ದೊಡ್ಡ ಸಂಪಿಗೆ ಮರದ ವಿಶೇಷ ವೆಂದರೆ ಒಂದೆಮರದಲ್ಲಿ ಕೆಂಪು ಹಾಗು ಹಳದಿ ಬಣ್ಣದ ಹೂ ಗಳನ್ನ ಬೆಳಸುವುದು!!ಈ ಮರದ ಸನಿಹ ಹರಿವ ನದಿ ಜಮದಗ್ನಿ ಮಹರ್ಷಿಯ ಪತ್ನಿ ರೇಣುಕ ದೇವಿಯ ಅವತಾರವೆಂದೂ,ಈ ಪ್ರದೇಶದಲ್ಲೇ ವಾಸಿಸುತ್ತಿದ್ದರೆಂದೂ, ಪ್ರತೀತಿ [ಇದು ಕರ್ನಾಟಕ ಗೆಜೆತೀರ್ನಲ್ಲಿ ದಾಖಲಾಗಿದೆ]ದೊಡ್ಡ ಸಂಪಿಗೆ ಮರದ  ಸುತ್ತ ಲಿಂಗ ಗಳೆಂದು ಪೂಜಿಸುವ ಸುಮಾರು ಒಂದು ನೂರಕ್ಕೂ ಹೆಚ್ಚಿನ ಶಿಲೆಗಳಿದ್ದು ,ಮರದ ಸುತ್ತಳತೆ ೨೦ ಮೀಟರ್ ಇರುತ್ತದೆ!!! ಮರದ ಎತ್ತರ ೧೩೦ ಅಡಿ ಇದ್ದು ಗಗನ ಚುಂಬಿಯಾಗಿದೆ!!ಇಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಕೆ .ಗುಡಿ ಇಂದ ಬಿ.ಆರ್. ಹಿಲ್ಲ್ಸ್ ದಾರಿಯ ಮಧ್ಯೆ ಸಿಗುವ ಅರಣ್ಯ ಇಲಾಖೆಯ ಗೇಂ ರೂಟ್ ನಲ್ಲಿ ಸಾಗಬೇಕು.ದಟ್ಟ ಕಾಡಿನಲ್ಲಿನ ಪ್ರದೇಶ ವಾದ ಕಾರಣ ಆನೆ, ಕಾಟಿ, ಕಾಡು ಹಂದಿ, ,ಹುಲಿ,ಸಾರಂಗ, ಮುಂತಾದ ಜೀವಿಗಳು ಅದೃಷ್ಟವಿದ್ದರೆ ಸಿಗಬಹುದು !!!.            ನೆನಪಿಡಿ ಇದು  ಕಾಡುಗಳ್ಳ ವೀರಪ್ಪನ್  ಓಡಾಡಿದ ಪ್ರದೇಶ !!!.ಇಲ್ಲಿನ ಗಾಳಿ ,ನೀರು ಸಂಪೂರ್ಣ ಶುದ್ದ ವಾಗಿದ್ದು ಮನಸ್ಸಿಗೆ ಉಲ್ಲಾಸ ನೀಡುತ್ತದೆ.ಅವಕಾಶ ಸಿಕ್ಕರೆ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಿಬನ್ನಿ.
ನಮ್ಮ ಮುಂದಿನ ಭೇಟಿ "ಕೆ.ಗುಡಿ" ಅಥವಾ "ಕ್ಯಾತೆ ದೇವರಗುಡಿ"   


 


ಕ್ಯಾತೆ ದೇವರ ಗುಡಿ





     ಇದು ಬಿಳಿಗಿರಿರಂಗನಬೆಟ್ಟ ಹಾಗು ಚಾಮರಾಜನಗರ ಮಾರ್ಗದ ನಡುವೆ ಬರುತ್ತದೆ. ಇಲ್ಲಿ ಕ್ಯಾತೆದೇವರ ಒಂದು ಸಣ್ಣ ಗುಡಿ ಇದೆ , ಪ್ರತೀ ಕಾಡಿಗೂ ಒಂದು ದೇವರಿರುವಂತೆ  ಇಲ್ಲಿನ ಕಾನನ ಸೀಮೆಗೂ    ಕ್ಯಾತೆ ದೇವರು    ಒಡೆಯ. ಇಲ್ಲಿನವರು ಭಕ್ತಿಯಿಂದ ನಡೆದು ನಡೆದು ಕೊಳ್ಳುತ್ತಾರೆ.  ಬನ್ನಿ ಸನಿಹ ದಲ್ಲೇ ಒಂದು ಕೊಳ ಇದೆ ಅಲ್ಲಿಗೆ ಹೋಗೋಣ  ಅಲ್ಲಿ ಒಮ್ಮೊಮ್ಮೆ ಆನೆಗಳಿಗೆ ಸ್ನಾನ ಮಾಡಿಸುವ ದೃಶ್ಯ ಕಾಣಬಹುದು ,        ಅಥವಾ ನೀವು ಇಲ್ಲೇ ಇರುವ ಜಂಗಲ್ ಲಾಡ್ಜಸ್ ನಲ್ಲಿ ಮುಂಚೆಯೇ ಕಾಯ್ದಿರಿಸಿದ್ದಲ್ಲಿ  ಇಲ್ಲಿನ ಪ್ಯಾಕೇಜ್ ನಲ್ಲಿ ನಿಮಗೆ ಕಾಡಿನ ದರ್ಶನ ಮಾಡಿಸುತ್ತಾರೆ. ಅಥವಾ ಎಲ್ಲೂ ಹೋಗದೆ ಇಲ್ಲೇ ಇದ್ದರೂ ನಿಮಗೆ ಮುಂಜಾವು ಹಾಗು ಸಂಜೆ ವೇಳೆಯಲ್ಲಿ  ಜಿಂಕೆ, ಕಾಡೆಮ್ಮೆ , ಚಿರತೆ, ಹುಲಿ ಮುಂತಾದ ವನ್ಯ ಜೀವಿಗಳನ್ನು ಕಾಣುವ ಸಾಧ್ಯತೆ ಹೆಚ್ಚು.  ಒಟ್ಟಿನಲ್ಲಿ ಈ ಪ್ರದೇಶ ಶಾಂತತೆ ಯಿಂದ ಕೂಡಿದ್ದು ಪ್ರವಾಸಿಗಳಿಗೆ ಮುದ ನೀಡುತ್ತದೆ.                   . ಕಳೆದ ಎಂಟು ಸಂಚಿಕೆ ಗಳಿಂದ [ ಈ ಸಂಚಿಕೆಯನ್ನೂ ಸೇರಿ ] ನನ್ನ ಜೊತೆಯಲ್ಲಿ ಬಿಳಿಗಿರಿ ರಂಗನ ಬೆಟ್ಟದ ಪಯಣ ದಲ್ಲಿ ಜೊತೆ ಯಿದ್ದು ಮಾಹಿತಿ ಪಡೆದಿದ್ದೀರ ಮುಂದಿನ ನಿಮ್ಮ ಬಿಳಿಗಿರಿರಂಗನ  ಬೆಟ್ಟದ ಪ್ರವಾಸಕ್ಕೆ ಈ ಮಾಹಿತಿಗಳು  ನಿಮಗೆ ಹೆಚ್ಚಿನಆಸಕ್ತಿ ಮೂಡಿಸಲಿ ಎಂದು ಆಶಿಸುತ್ತಾ  ಪಯಣವನ್ನು ಮುಗಿಸುತ್ತೇನೆ. ಮುಂದಿನ  ಸಂಚಿಕೆಯಲ್ಲಿ ಮತ್ತೆ ಹೊಸ ವಿಚಾರ  ದೊಂದಿಗೆ ಭೇಟಿಯಾಗೋಣ.ಎಲ್ಲಾ ಗೆಳೆಯರಿಗೂ ನಮಸ್ಕಾರ . 

7 comments:

Deep said...

Balu. Lekhana male channagi moodi bandide. BR hills ge hogona endu manassadagalella illige bandre Saku alva:)

ಸುಬ್ರಮಣ್ಯ said...

ಒಳ್ಳೇ ಲೇಖನ ಬಾಲು ಅಣ್ಣ

prabhamani nagaraja said...

ಬಿಳಿಗಿರಿ ರ೦ಗನ ಬೆಟ್ಟವನ್ನು ನೋಡಿ ಬ೦ದಿದ್ದೆವು. ಈಗ ನಿಮ್ಮ ಲೇಖನ ಮಾಲೆಯಿ೦ದ ಅದರ ಅ೦ದವನ್ನು ಆಸ್ವಾದಿಸುತ್ತಿದ್ದೇನೆ. ಧನ್ಯವಾದಗಳು ಬಾಲುಅವರೇ,

ಸೀತಾರಾಮ. ಕೆ. / SITARAM.K said...

ಮಾಹಿತಿಗೆ ಧನ್ಯವಾದಗಳು.

sunaath said...

ತುಂಬ ಉತ್ತಮ ವಿವರಣೆ ಹಾಗು ಚಿತ್ರಗಳು.

ಸಾಗರದಾಚೆಯ ಇಂಚರ said...

sundara photos, sundara vivarane sir

hogona omme, nanna karkondu hogi :)

shivu.k said...

ಸರ್,
ನನಗೂ ಅಲ್ಲಿಗೆ ಹೋಗಬೇಕೆನ್ನುವ ಆಸೆಯಿದೆ. ಹೋಗುವ ಮೊದಲು ಮತ್ತೊಮ್ಮೆ ಈ ಲೇಖನಗಳನ್ನು ಓದಿಕೊಂಡೇ ಹೋಗುತ್ತೇನೆ. ಅಷ್ಟು ಚೆನ್ನಾಗಿ ಮಾಹಿತಿಸಹಿತ ವಿವರಣೆಯನ್ನು ಕೊಟ್ಟಿದ್ದೀರಿ..ಧನ್ಯವಾದಗಳು.