Tuesday, September 13, 2011

ಬಿಳಿಗಿರಿ ರಂಗನ ಪುನರ್ ಪ್ರತಿಷ್ಟಾಪಿಸಿದ ಮುಜೀಬ್ ಅಹಮದ್ !!ಇಮಾಮರ ಗೋಕುಲಾಷ್ಟಮಿ ಸಂಬಂಧ ಇಲ್ಲಿದೆ!!!!!

ಕಳೆದ ವಾರ  ಹಾಗೆ ಮನೆಯಲ್ಲಿ ಕುಳಿತಿದ್ದೆ , ಸ್ನೇಹಿತರಿಗೆ ಮೊಬೈಲಿನಿಂದ ರಂಜಾನ್ , ಗೌರಿ ಹಬ್ಬ, ಗಣೇಶ ಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದೆ. ನನ್ನ ಹಲವಾರು ಸ್ನೇಹಿತರಿಗೆ  ಶುಭ ಸಂದೇಶ ಕಳುಹಿಸಿದ ನಾನು ಮಾರನೆಯ ದಿನದ ಹಬ್ಬದ ತಯಾರಿಯಲ್ಲಿ  ತೊಡಗಿದೆ. ಅಷ್ಟರಲ್ಲಿ   ಸ್ನೇಹಿತರೊಬ್ಬರ   ಕರೆಬಂದು ದಿನಾಂಕ 28 /08 /2011 ರ  ವಿಜಯ ಕರ್ನಾಟಕ ಪತ್ರಿಕೆಯ ಲವ್ ಲವಿಕೆಯ ಸಂಚಿಕೆಯನ್ನು ಓದಲು ತಿಳಿಸಿದರು. ಪತ್ರಿಕೆಯನ್ನು ಕೈಗೆತ್ತಿಕೊಂಡು ಓದಲು ಹೋದಾಗ ಕಂಡಿದ್ದೆ ನನಗೂ ತಿಳಿದಿದ್ದ ಈ ವಿಸ್ಮಯ. ಹೌದು ಇದನ್ನು ನಾನೂ ಸಹ ಬ್ಲಾಗಿನಲ್ಲಿ ಹಾಕಲು ಉದ್ದೇಶಿಸಿದ್ದೆ. ಆದರೆ ನೆಚ್ಚಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಡಾ// ಏಜಾಸುದ್ದೀನ್ ರವರು ಒಂದು ಅಂದದ ವಿಚಾರ ಪೂರ್ಣ ಲೇಖನವನ್ನು ಬರೆದಿದ್ದರು. ನೆಚ್ಚಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿ "ಇಮಾಮ ಸಾಬರ ಗೋಕುಲಾಷ್ಟಮಿ " ಸಂಭಂದದ  ಕಥೆ  ಬರೆದಿದ್ದೇನೆ. [ ಈ ಲೇಖನ ಬರೆಯುವ ಮೊದಲು ಶ್ರೀ ಮುಜೀಬ್ ಅಹಮದ್ ರವರ  ಅವರಿಂದ ಮತ್ತಷ್ಟು ಮಾಹಿತಿ ಪಡೆದು ಈ ಲೇಖನ  ಪ್ರಕಟಿಸಲು ಅನುಮತಿ ಪಡೆದಿದ್ದೇನೆ]. ಆದರೂ ಬರೆದ  ಡಾ//ಎಜಾಸುದ್ದೀನ್ , ಹಾಗು ಪ್ರಕಟಣೆ ಮಾಡಿರುವ ವಿಜಯ ಕರ್ನಾಟಕ ಪತ್ರಿಕೆಗೆ ಕೃತಜ್ಞನಾಗಿದ್ದೇನೆ.                                     
ವಿಜಯ ಕರ್ನಾಟಕ ಪತ್ರಿಕೆಯ ಲೇಖನ

ಬನ್ನಿ  ವಿಚಾರ ತಿಳಿಯೋಣ. 1986 ನೆ ಇಸವಿ, ಬಿಳಿಗಿರಿ ರಂಗನ ಬೆಟ್ಟ  ಆಗಿನ್ನೂ  ಅವಿಭಜಿತ ಮೈಸೂರು ಜಿಲ್ಲೆಯಲ್ಲಿಯೇ ಇತ್ತು. ಒಮ್ಮೆ ಬಿಳಿಗಿರಿ ರಂಗನಾಥ ಸ್ವಾಮಿಯ ಅರ್ಚಕರಾದ  ಶ್ರೀ ನಾಗರಾಜ ಭಟ್ಟರು ತಾಲೂಕು ಕಚೇರಿಗೆ ಬಂದು ತಹಸಿಲ್ದಾರ್ ರವಲ್ಲಿ ಮನವಿ ಮಾಡಿ ಕೊಳ್ಳುತ್ತಾರೆ  ಸ್ವಾಮೀ  ಬಿಳಿಗಿರಿ ರಂಗನಾಥನ ಮೂಲ ವಿಗ್ರಹ ಅಲ್ಲಾಡುತ್ತಿದೆ  , ದಯಮಾಡಿ ಇದನ್ನು  ಪರಿಶೀಲಿಸಿ ಸರ್ಕಾರದ ವತಿಯಿಂದ ಕ್ರಮ ವಹಿಸಿ ದೇವಾಲಯ ದಲ್ಲಿ ಮೂಲ ವಿಗ್ರಹ ಪುನರ್ ಪ್ರತಿಷ್ಟಾಪಿಸಿ ದೇವಾಲಯದ ಪೂಜೆ ನಡೆಯಲು ಅವಕಾಶ ಮಾಡಿಕೊಡಿ,  ಎಂದು ವಿನಂತಿ ಮಾಡುತ್ತಾರೆ. ಯಾವುದೇ ದೇವಾಲಯದಲ್ಲಿ  ಭಗ್ನಗೊಂಡ, ವಿರೂಪಹೊಂದಿದ , ಅಲ್ಲಾಡುವ  ವಿಗ್ರಹಗಳನ್ನು ಪೂಜಿಸುವುದಿಲ್ಲಾ ಎಂಬ ಅಂಶ ತಿಳಿದಿದ್ದ  ತಹಸಿಲ್ದಾರ್ ಮುಜೀಬ್ ಅಹಮದ್ ರವರು , ಈ ಕಾರ್ಯದ ಬಗ್ಗೆ ಅರ್ಜಿ ಸ್ವೀಕರಿಸಿ  ಯೋಚಿಸಲು ತೊಡಗುತ್ತಾರೆ. ಅರ್ಚಕ ರಾದ ನಾಗರಾಜ ಭಟ್ಟರ ಬಳಿ ಮತ್ತಷ್ಟು ಹೆಚ್ಚಿನ ಮಾಹಿತಿ ವಿನಿಮಯ ಮಾಡಿ ಅವರನ್ನು ಬೀಳ್ಕೊಟ್ಟು ತಮ್ಮ ಯೋಚನಾ ಲಹರಿಯಲ್ಲಿ ತೊಡಗುತ್ತಾರೆ.ಇಂತಹ ಕಾರ್ಯದಲ್ಲಿ ತಾವು ತೊಡಗಿದಾಗ ಯಾವ ರೀತಿ ಪರಿಣಾಮ ಆಗಬಹುದು ಎಂಬ ವಿಚಾರದ ಬಗ್ಗೆ ಯೋಚಿಸಿದಾಗ ಅವರ ಮನಸ್ಸು ಭಾವೈಕ್ಯದ ಪರವಾಗಿ ನಿಲ್ಲುತ್ತದೆ. ಮಾರನೆಯದಿನ ದೇವಾಲಯದ ಧರ್ಮದರ್ಶಿಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅವಲೋಕಿಸುತ್ತಾರೆ. ಈ ವಿಚಾರಗಳನ್ನು ಸರ್ಕಾರದ ಮಟ್ಟದ ಮುಜರಾಯಿ[ ಧಾರ್ಮಿಕ ದತ್ತಿ ಇಲಾಖೆ ] ಕಮಿಷನರ್ , ಹಾಗು ಜಿಲ್ಲಾಧಿಕಾರಿಗಳಿಗೆ  ಇಲ್ಲಿನ ವಿಚಾರದ  ಬಗ್ಗೆ ಪತ್ರ ಬರೆದು ಅವರ ಮನ  ಒಲಿಸಿ  ಅವರನ್ನು ಬಿಳಿಗಿರಿ  ರಂಗನ ಬೆಟ್ಟಕ್ಕೆ ಕರೆತರುತ್ತಾರೆ. ಅವರುಗಳೊಂದಿಗೆ ಸಮಾಲೋಚಿಸಿ ನಂತರ  ಯಳಂದೂರು ತಾಲೂಕಿನ  ಸರ್ವ ಜನಾಂಗದ ಮುಖಂಡರ ಸಭೆಯನ್ನು ಕರೆದು ವಿಚಾರ ವಿಮರ್ಶೆ ಮಾಡಲಾಗಿ ಎಲ್ಲಾ  ಜನಾಂಗದ ಮುಖಂಡರು ಮುಜೀಬ್ ಅಹಮದ್ ರವರ ನೇತೃತ್ವದಲ್ಲಿ  ಪುನರ್ಪ್ರತಿಷ್ಟಾಪನೆ  ಕಾರ್ಯ ಆಗಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ. ಅದರಂತೆ 1980 ರ  ಸೆಪ್ಟೆಂಬರ್ 01 ಮಧ್ಯಾಹ್ನ 12  ಘಂಟೆಗೆ   ಕಾರ್ಯಕ್ರಮ  ವಿಧಿ ವಿಧಾನ ಆರಂಭಿಸಿ ಅಕ್ಟೋಬರ್ 26 ರಂದು ಹೊಸ ವಿಗ್ರಹವನ್ನು ಧಾರ್ಮಿಕ ವಿಧಿಗಳೊಂದಿಗೆ ಪುನರ್ಪ್ರತಿಷ್ಟಾಪಿಸಬೇಕೆಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಎಲ್ಲಾ ಜವಾಬ್ಧಾರಿ ಹೊತ್ತ ಮುಜೀಬ್ ರವರಿಗೆ  ಮನದಲ್ಲಿ ತಳಮಳ ಇಂತಹ ಜವಾಬ್ಧಾರಿ ಕಾರ್ಯದಲ್ಲಿ ತಾನು ಎಷ್ಟರ ಮಟ್ಟಿಗೆ ತೊಡಗಬಲ್ಲೆ, ಹೆಚ್ಚು ಕಡಿಮೆ ಆದರೆ ಗತಿಯೇನು?? ಎಂಬ ಬಗ್ಗೆ ಯೋಚನೆ ಕಾಡಲು ಆರಂಭವಾಗುತ್ತದೆ.  1986 ರ ಆಗಸ್ಟ್ 31 ರಂದು ರಾತ್ರಿ ಒಂದೆರಡು ಬಾರಿ ಕನಸಿನಲ್ಲಿ ಬಿಳಿಗಿರಿರಂಗನೆ ಕನಸಿನಲ್ಲಿ ಬಂದು ಈ ಕಾರ್ಯವನ್ನು ಮಾಡಲು ನೀನು ಸಮರ್ಥ ಎಂದು ಹೇಳಿದಂತೆ ಭಾಸವಾಗುತ್ತದೆ . ಬೆಳಗಾಗುವುದನ್ನೇ ಕಾದಿದ್ದು ಮುಂಜಾನೆಯೇ ಬಿಳಿಗಿರಿ ರಂಗನ ಬೆಟ್ಟಕ್ಕೆ  ಆತುರಾತುರವಾಗಿ ದಾವಿಸುತ್ತಾರೆ. ದೇವರ ವಿಗ್ರಹದ ಎದುರು ನಿಲ್ಲ ಬೇಕೆಂಬ ಭಾವನೆ ಕಾಡಿ  ಅಲ್ಲಿಗೆ ಹೋಗಿ ವಿಗ್ರಹದ ಎದುರು ನಿಂತರೆ ಅಂದಿನ ಪ್ರಧಾನ ಆಗಮಿಕರಾದ  ಶ್ರೀ ಕೇಶವಾಚಾರ್ ರವರು ಯಜ್ಞಸಮಾನವಾದ ಕಾರ್ಯದ ಚುಕ್ಕಾಣಿಯನ್ನೇ ಇವರ ಕೈಗೆ ನೀಡುತ್ತಾರೆ.ಹಾಗು ಮುಜೀಬ್ ಅಹಮದ್ ರವರ ಹೆಸರಿನಲ್ಲೇ ಪ್ರತಿಷ್ಠಾಪನಾ ಸಂಕಲ್ಪ ಮಾಡಲಾಗುತ್ತದೆ , ಇದನ್ನು ಕಂಡು ದಿಗ್ಭ್ರಮೆಯಿಂದ  ಇದೇನು ಕೇಶವಾಚಾರರೆ??? ನೀವು ಮಾಡಿದ್ದು ಎಂದರೆ   ನನ್ನದೇನೂ ಇಲ್ಲಪ್ಪಾ  ಎಲ್ಲವೂ ಆ  ಬಿಳಿಗಿರಿರಂಗ ಆಡಿಸುತ್ತಿರುವ ನಾಟಕ ಇದು ಅಷ್ಟೇ ಅನ್ನುತ್ತಾರೆ. ಹಾಗು ಮೂಲವಿಗ್ರಹವನ್ನು ತಾತ್ಕಾಲಿಕವಾಗಿ ಬೇರೆಡೆಗೆ ಇದುವ ದಾರಿ ಮಾಡಿಕೊಡುವ ಕಳಾಕರ್ಷಣೆ ವಿಧಿ ಪ್ರಾರಂಭ ಆಗುವ ಸಮಯದಲ್ಲಿ ಪ್ರಧಾನ ಆಗಮಿಕರು ಗರ್ಭಗುಡಿಯೊಳಗೆ ಮೊದಲು ಮುಜೀಬ್ ಅಹಮದ್ ರವರನ್ನು ಕರೆದುಕೊಂಡು ಹೋಗುತ್ತಾರೆ.ಆಗ ಮನ ತುಂಬಿಬಂದ ಮುಜೀಬ್ ಅಹಮದ್ ರವರು ತಮ್ಮನ್ನು ತಾವು ನಂಬದ ಹಂತಕ್ಕೆ ಮುಟ್ಟಿರುತ್ತಾರೆ . ಸತತವಾಗಿ ಇವರ ಮುಂದಾಳತ್ವದಲ್ಲಿ ಐವತ್ತಾರು ದಿನ  ಹಗಲು ರಾತ್ರಿ  ಧಾರ್ಮಿಕ ಕಾರ್ಯಗಳು ನಿರ್ವಿಗ್ನವಾಗಿ ನಡೆಯುತ್ತವೆ. ಈ ಕಾರ್ಯಕ್ಕೆ ಬರುವ ಸಹಸ್ರಾರು ಭಕ್ತರಿಗೆ ಯಾವುದೇ ತೊಂದರೆ  ಆಗದಂತೆ   ಸಕಲ ವ್ಯವಸ್ತೆಯನ್ನು ಮಾಡಿ ಮುಜೀಬ್ ಅಹಮದ್  ಜೈ ಅನ್ನಿಸಿಕೊಳ್ಳುತ್ತಾರೆ.  1986  ರ ಅಕ್ಟೋಬರ್ 26ರಂದು ಬಿಳಿಗಿರಿರಂಗನ ಪರ್ತಿಷ್ಟಾಪನೆ ಕಾರ್ಯ ಯಶಸ್ವಿಯಾಗಿ ನೆರವೇರಿತು.ಅಲ್ಲಿಗೆ ಆಗಮಿಸಿದ್ದ ವಿವಿಧ ಧಾರ್ಮಿಕ ಕ್ಷೇತ್ರಗಳ ಆಗಮಿಕರು ಸುಮಾರು ಐವತ್ತು ಜನಕ್ಕೂ ಹೆಚ್ಚು ಆಗಮಿಕರು ವೇಧಘೋಶಗಳಿಂದ ವಾತಾವರಣವನ್ನು ಭಕ್ತಿ ಪರವಶಗೊಳಿಸುತ್ತಾರೆ. ನಂತರ ಕಾರ್ಯಕ್ರಮ ಮುಗಿಸಿ ಹೊರಡುವ ಸಮಯ ಬಂದಾಗ ಮುಜೀಬ್ ಅಹಮದ್ ರವರನ್ನು ಅಪ್ಪಿಕೊಂಡ ಪ್ರಧಾನ ಆಗಮಿಕರಾದ ಕೇಶವಾಚಾರ್ ರವರು  ಸ್ವಾಮೀ ನಿಮ್ಮ ಸಹಕಾರದಿಂದ ಬಿಳಿಗಿರಿರಂಗನ  ಪ್ರೇರಣೆಯಂತೆ ಕೆಲಸ ಸುಗಮವಾಗಿ ಆಯಿತು. ನೀವೊಬ್ಬ ಮಹಾಬ್ರಾಹ್ಮಣ  ನನಗೆ ಹೊರಡಲು ಅನುಮತಿ ಕೊಡಿ ಎಂದು ಭಾವ ಪೂರ್ವಕವಾಗಿ ಗದ್ಗತಿತರಾಗುತ್ತಾರೆ .ಕಣ್ಣಲ್ಲಿ ಆನಂದ ಭಾಷ್ಪ ಸುರಿಸುತ್ತಾ  ನಿಮ್ಮನ್ನು ಆ ಬಿಳಿಗಿರಿರಂಗ ಹರಸಿದ್ದಾನೆ ಎಂಬ  ಮನದ ಮಾತನ್ನು ಹೇಳುತ್ತಾರೆ.ಬಿಳಿಗಿರಿ ರಂಗನಾಥನ ಮೂರ್ತಿಯಲ್ಲಿ ಒಂದು ದಿವ್ಯ ಕಳೆ ಈ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿತ್ತು.          

ಮೇಲಿನ ಘಟನೆ ಧರ್ಮದ ವಿಚಾರದಲ್ಲಿ ಕಿತ್ತಾಡಿಕೊಂಡು , ಮನುಷ್ಯ ಮನುಷ್ಯರ ಮಧ್ಯೆ  ಗೋಡೆ ಕಟ್ಟಿ ತಮ್ಮ ಬೆಲೆ ಬೇಯಿಸಿಕೊಳ್ಳುವ ಹಲವು ವಿಕೃತ ಮನಸುಗಳಿಗೆ ಪಾಠದಂತಿದೆ. ಧರ್ಮ ಯಾವುದಾದರೇನು ಮನುಷ್ಯತ್ವದ ತಳಹದಿ ಆಧಾರದ ಮೇಲೆ ತನ್ನ ಅಧಿಕಾರವನ್ನು ಬಳಸಿ ಸ್ಥಳೀಯ ಜನರ ಮನಗೆದ್ದು  ಜನ ಸೇವೆ ಮಾಡ ಬಹುದು ಎಂಬುದನ್ನು ತೋರಿಸಿಕೊಟ್ಟ  ಮುಜೀಬ್ ಅಹಮದ್ ರವರು ನಂತರ ಯಳಂದೂರು ತಾಲೂಕಿನ ಪ್ರತಿ ಹಳ್ಳಿ ಯಲ್ಲೂ ಮನೆಗೆ ಒಂದರಂತೆ  ಅಂಚೆ ಕಚೇರಿ  ಆರ್.ಡಿ. ಖಾತೆ ತೆಗೆಸಿ  ಉಳಿತಾಯ ಯೋಜನೆಗೆ ಜನರು ಮುಂದಾಗುವಂತೆ ಮಾಡಿ ಇಡೀ ತಾಲೂಕನ್ನು ಉಳಿತಾಯ ಬಚತ್ ತಾಲೂಕೆಂದು ದೇಶ ಗುರುತಿಸುವಂತೆ  ಮಾಡುತ್ತಾರೆ,  ಹಾಗು ತಾಲೂಕಿನಲ್ಲಿ ಹಲವಾರು ಜನಪರ ಕಾರ್ಯ ನೆರವೇರಿಸಿ ಜನ ಮನ್ನಣೆ ಪಡೆದು  ಜನರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾರೆ. ಇವತ್ತಿಗೂ ಬಿಳಿಗಿರಿ ರಂಗನ ಬೆಟ್ಟದಲ್ಲಿ ಇವರ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತವೆ. ಉತ್ತಮ ಕಾರ್ಯ ಮಾಡಿದ ಮುಜೀಬ್ ಅಹಮದ್ ರವರನ್ನು  ಅಬಿನಂದಿಸೋಣ  ಅಲ್ಲವೇ.

9 comments:

Ittigecement said...

ಕೋಮು ಸೌಹಾರ್ದತೆ ಅಂದರೆ ಇದು..

ಮುಜೀಬ್ ಅವರಿಗೆ ನಮನಗಳು..

ಅವರನ್ನೊಮ್ಮೆ ಭೇಟಿಯಾಗಬೇಕು ಅಂತ ಅನ್ನಿಸ್ತಿದೆ...

ತುಂಬಾ ಮಾಹಿತಿ ಪೂರ್ಣ ಲೇಖನ ....
ತುಂಬಾ ತುಂಬಾ ಧನ್ಯವಾದಗಳು..

Deep said...

Balu uttama mahiti. Ivara karma odedu aluva politicians ge maadari aga beku. Dhanyavaada

ಜಲನಯನ said...

ಬಾಲು ಮೊನ್ನೆ ನಾಡಿಗೆ ಬಂದಿದ್ದಾಗ ನೀವು ಮುಜೀಬ್ ಅವ್ರ ಬಗ್ಗೆ ಫೋನ್ ಮೂಲ್ಕ ಹೇಳಿದ್ದು ..ನನಗೆ ಆಗ್ಲೇ ಸಣ್ಣ ಡೌಟ್ ಶುರು ಆಯ್ತು.. ಹೌದು...ಫೋಟೋ ನೋಡಿ ಖಾತ್ರಿ ಆಯ್ತು...ಇದು ನಮ್ಮ ಸೀನಿಯರ್ (ಸಿಟಿ ಮಾರ್ಕೆಟಿನ ಬಳಿಯಿದ್ದ ಸೆಂಟ್ರಲ್ ಮುಸ್ಲಿಂ ಹಾಸ್ಟಲ್). ನನಗೆ ದೂರದ ಸಂಬಂಧ ಅಂತಾನೂ ತಿಳೀತು ಆದ್ರೆ ಅದು ಬಹು ದೂರ ಇದ್ದಿದ್ರಿಂದ ಬರೀ ಸೀನಿಯರ್ ಲೆವೆಲ್ ಗೆ ನಮ್ಮ ನಂಟು ನಿಂತಿತ್ತು... ಹೌದು ಕನ್ನಡ ಬಹಳ ಸ್ಫುಟವಾಗಿ ಮಾತನಾಡ್ತಾರೆ, ಅವರು ಆಗ ಒಂದು ಸಿನಿಮಾ ಹಾಡೂ ಹಾಡಿದ್ರು (ಗೊತ್ತಿಲ್ಲ ದು ರಿಲೀಸ್ ಆಯ್ತೋ ಇಲ್ವೋ...) ಆದ್ರೆ ಆ ಹಾಡು ಸ್ವಲ್ಪ ಸ್ವಲ್ಪ ಇನ್ನೂ ನನಗೆ ನೆನ್ಪಿದೆ..ಅದ್ರಲ್ಲಿ "ಭೇದ ಭಾವ ಇಲ್ಲ ಈ ತಾಯಿ ಮಡಿಲಿಗೆ...ಅವ್ವ ಭೂಮ್ತಾಯಿ ಸೆರಗಾಸುತಾಳೆ" ನನಗೆ ಮೆಚ್ಚುಗೆಯಾದ ಸಾಲು...
ಒಮ್ಮೆ ಟಿವಿಯಲ್ಲೂ ಯಾವುದೋ ರಾಜ ಮನೆತನದ ಆಸ್ತಿ ತಗಾದೆ ವಿಷಯ ಇತ್ಯರ್ಥ ಆಗಿ ಅದು ಸರ್ಕಾರಕ್ಕೆ ಸೇರಬೇಕು ಅನ್ನ್ನೋ ತೀರ್ಮಾನ ಬಂದ ಹಿನ್ನೆಲೆಯಲ್ಲಿ ಅವರ ಇಂಟರ್ವ್ಯೂ ಬಂದಿತ್ತು....
ವಿಷಯಕ್ಕೆ ಬರೋಣ...ಇಂತಹ ಬಲು ವಿಶಾಲ ಮನೋಧರ್ಮದವರು ಮುಸ್ಲಿಮರು ಎನ್ನುವುದು ಸಂತಸದ ವಿಷಯ..ನನ್ನನ್ನ ನನ್ನ ಸ್ಕೂಲ್ ಹೆಡ್ಮಾಸ್ಟರ್ ನಾಗರಾಜಾಚಾರ್ ಗಣೇಶನ ವಿಸರ್ಜನಾ ಪೂರ್ವದ ಮೂರ್ತಿ ಊರ ಮೆರವಣಿಗೆಗೆ ಪೂಜೆಗೆ ಅರ್ಚಕನ ಜವಾಬ್ದಾರಿ ಕೊಟ್ಟಿದ್ದು ನೆನಪಿದೆ....ಅಂತಹಾ ದಿನಗಳು ಅವು....

ಮನಸಿನಮನೆಯವನು said...

ಹೌದು ಸರ್, ಕೋಮು ಸೌಹಾರ್ದತೆ ಅಂದ್ರೆ ಇದೇ.

Badarinath Palavalli said...

ಮೊದಲಿಗೆ ಬ್ಲಾಗಿನಲ್ಲಿ ಇಂತಹ ಉತ್ತಮ ಬರಹ ಪ್ರಕಟಿಸಿದ ನಿಮಗೂ ಮತ್ತು ವಿ.ಕ/ಲ.ಲ ಯಲ್ಲಿ ಒಳ್ಳೆ ಕನ್ನಡ ಲೇಖನ ಬರೆದ ಡಾ|| ಎಜಾಸುದ್ದೀನ್ ಅವರಿಗೂ ಅಭಿನಂದನೆಗಳು.

ಟಿಪ್ಪು ಮೈಸೂರು ರಾಜ್ಯದಲ್ಲಿ ಹಲವು ದೇಗುಲಗಳನ್ನು ಜಿರ್ಮಿಸಿದ ಎಂಬುದು ಮೈಸೂರಿಗರಾದ ನಿಮಗೂ ಗೊತ್ತಿರುತ್ತದೆ. ಮುಜೀಬ್ ಅಹಮದರ ಇಂತಹ ದೈವ ಕಾರ್ಯ ನಿಜವಾಗಲೂ ಪ್ರಕಾಶಣ್ಣ ಹೇಳಿದಂತೆ ಕೌಮು ಸೌಹಾರ್ಧತೆಯ ಉತ್ಕೃಷ್ಟ ಉದಾಹರಣೆಯೇ ಸರಿ.

ನೋಡೋಣ ರಂಗನಾಥ ಕೃಪೆ ಮಾಡಿದರೆ ಈ ಮಹಮದೀಯನ ಹಿಂದೂ ಕೈಂಕರ್ಯದ ಬಗ್ಗೆ ಒಂದು ಸಾಕ್ಷ್ಯ ಚಿತ್ರ ನಿರ್ಮಿಸುವ ಅವಕಾಶ ನನಗೆ ಬಂದರೂ ಬಂದೀತು!

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

ಮನದಾಳದಿಂದ............ said...

ಕೋಮು ಸೌಹಾರ್ದತೆಯ ಬಗ್ಗೆ ಭಾಷಣ ಬಿಗಿದು ಒಳಗೆ ಬಡಿದಾಡಿಕೊಳ್ಳುವ ಎಷ್ಟೋ ಜನರು ಶ್ರೀಯುತ ಮುಜೀಬ್ ಅಹಮದ್ ಅವರ ಜೀವನ ಶೈಲಿಯನ್ನು ಕಲಿಯಬೇಕು!!!

ನಮ್ಮೂರಲ್ಲಿ ಹಣಗೆರೆ ಕಟ್ಟೆ ಅಂತ ಒಂದು ಊರಿದೆ. ಇಲ್ಲೊಂದು ದೇವಾಲಯ ಮತ್ತು ಮಸೀದಿ ಒಟ್ಟಿಗೆ ಇದೆ. ವರ್ಷವೂ ಜಾತ್ರೆ ನಡೆಯುತ್ತದೆ. ಜಾತಿ ಧರ್ಮದ ಹೆಸರಲ್ಲಿ ಇಂದಿಗೂ ಯಾವುದೇ ಧುರ್ಗಟನೆಗಳು ನಡೆದ ಉದಾಹರಣೆಯಿಲ್ಲ! ಇಲ್ಲಿ ರಂಜಾನ್, ದೀಪಾವಳಿ ಎಲ್ಲರಿಗೂ ಹಬ್ಬವೇ!

ಮಾಹಿತಿಗೆ ಧನ್ಯವಾದಗಳು.

ಮನದಾಳದಿಂದ............ said...
This comment has been removed by the author.
shivu.k said...

ಬಾಲು ಸರ್,

ಕೋಮ ಸೌಹಾರ್ಧತೆ ಇಂಥವರಿಂದ ಕಲಿಯಬೇಕು. ಈ ಲೇಖನವನ್ನು ವಿಜಯಕರ್ನಾಟಕದಲ್ಲಿ ಓದಿದ್ದೆ. ಮತ್ತೊಮ್ಮೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

Sandeep K B said...

ಜೈ ಹೋ , ಇಂತಾ ಮಹನೀಯರಿಗೆ ನನ್ನ ನಮನಗಳು .....